ಶುಕ್ರವಾರ, ಫೆಬ್ರವರಿ 1, 2013


ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • `ನನ್ನನ್ನು ಹಾಳು ಮಾಡಿದಳು ಆ ಮುಂಡೆ' ಅನ್ನುವ ಗಂಡುಗಳು ಅನೇಕ.
          `ಆ  ಚಾಂಡಾಲನಿಂದಲೇ ನಾನು ಹಾಳಾದೆ' ಎಂದು ಹೇಳುವ ಹೆಂಣುಗಳು ಹೇರಳವಾಗಿವೆ.

           ಯಾರೂ ಯಾರನ್ನೂ ಹಾಳು ಮಾಡಿಲ್ಲ ಎಂಬುದು ಸತ್ಯವಾದ ಮಾತು. ಹಾಳಾಗಿರುವ ಪ್ರತಿಯೊಬ್ಬನೂ,          ಪ್ರತಿಯೊಬ್ಬಳೂ ಆತ್ಮ ನಿರೀಕ್ಷೆ ಮಾಡಿಕೊಂಡು ತನ್ನ ಪತನಕ್ಕೆ ತಾನೇ ಕಾರಣವನ್ನು ಹುಡುಕಿಕೊಂಡರೆ, ಅದು ದೊರೆಯುವುದು ತನ್ನಲ್ಲಿ ಮಾತ್ರವೇ ಆಲ್ಲದೆ ಬೇರೆಲ್ಲಿಯೂ ಅಲ್ಲ. ಆದರೆ ಆ ಆತ್ಮಪರೀಕ್ಷೆಗೆ ಎಲ್ಲಕ್ಕೂ ಮೊಟ್ಟಮೊದಲಾಗಿ ಆ ಇಚ್ಛೆ ಬೇಕು, ತಾನೇ ತನ್ನಿಂದ ಹೊರ ನಿಂತು ನೋಡಲು ರಾಗದ್ವೇ ಷಾತೀತ ದೃಷ್ಟಿ ಬೇಕು, ಅದನ್ನು ಒಪ್ಪಿಕೊಳ್ಳಲು ಮನೋದಾರ್ಢ್ಯ ಬೇಕು, ಆ ಪ್ರಾಮಾಣಿಕತೆಯೂ ಬೇಕು.
  •  ತನ್ನನ್ನು ಕೆಡಿಸಿ, ಹಾಳು ಮಾಡಿ, ಬೀದಿಯ ಭಿಕಾರಿಯನ್ನಾಗಿ ಮಾಡಿದ ಸುಭದ್ರ ತನ್ನ ಪಕ್ಕದ ಮನೆಯ ಇನ್ನೊಬ್ಬನನ್ನೇಕೆ ಹಾಗೆಯೇ ಬಿಟ್ಟಳು?
  • ಹುಳುವನ್ನು ಹುಡುಕುತ್ತ ಅದು ಮಲಗಿದ್ದಲ್ಲಿಗೆ ಹೋಗಿ ಅದರ ರೆಕ್ಕೆಯನ್ನು ಸುಟ್ಟು ಬರುವಂತಹ ದೀಪವು ಇನ್ನೂ ಹುಟ್ಟಲಿಲ್ಲ. ಹುಡುಕುತ್ತ ಬರುವುದು ಸುಡುವ ದೀಪವಲ್ಲ, ಪಾಪ! ಅದಕ್ಕೆ ಅಪವಾದ ಕಟ್ಟುವುದು ಮಹಾಪಾಪ! ಸುಡಿ ಸಿಕೊಳ್ಳುವ ಹುಳುವೇ ಅಡಬರಿಸುತ್ತ ಬಂದು ಅದರಲ್ಲಿ ಬೀಳುತ್ತದೆ. ಸುಟ್ಟುಕೊಂಡು ಸಾಯುತ್ತದೆ.
  • ಪ್ರಭಾಕರ ಮತ್ತು ಸುಭದ್ರರಲ್ಲಿ ಬೆಂಕಿ ಯಾರು? ಹುಳು ಯಾರು? ಇಬ್ಬರೂ ಅಷ್ಟಿಷ್ಟು ಬೆಂಕಿ, ಇಬ್ಬರೂ ಇಷ್ಟಷ್ಟು ಹುಳು. ಒಬ್ಬರನ್ನೊಬ್ಬರು ಬೆಂಕಿಯಾಗಿ ಸುಟ್ಟರು, ಹುಳುವಾಗಿ ಸುಟ್ಟುಕೊಂಡರು, ಕಡೆಗೆ ಪರಸ್ಪರ ಬೈಯುತ್ತ ಕುಳಿತರು.
              ಈಗ ನನ್ನ ಮುಕ್ತಕ:    

              ಮುದ್ರಾ ರಾಕ್ಷಸ 
            " ನಮ್ಮ ರಾಜರ ವಜ್ರಹಾರವ ಕದ್ದರು"
            ಎಂದಿತ್ತು ಕಳಿಸಿದ್ದ ವರದಿ.
            "ನಮ್ಮ ರಾಜರು ವಜ್ರಹಾರವ ಕದ್ದರು"
            ಎಂದಿತ್ತು ಅಚ್ಚಾದ ಸುದ್ದಿ!