ಮಂಗಳವಾರ, ಏಪ್ರಿಲ್ 30, 2013

ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಊರು ಚಿಕ್ಕದಿದ್ದಷ್ಟೂ ಊರಲ್ಲಿ ದೊಡ್ಡ ಮನುಷ್ಯರು ಹೆಚ್ಚು. 
          ನಾಟಕದಲ್ಲಿ ಹೆಂಣು ಚೆನ್ನಾಗಿದ್ದಷ್ಟೂ ಊರಲ್ಲಿ ಕಲಾಭಿಮಾನಿಗಳೂ ಹೆಚ್ಚು. ಕರೆಯಿಸಿಕೊಂಡು ಬಂದವರು ಕೆಲವರು, ಅವರಿವರಿಂದ ಹೇಳಿಸಿ ಕರೆಯಿಸಿಕೊಂಡು ಬಂದವರು ಹಲವರು, ತಾವೇ ಕೇಳಿಕೊಂಡು ಬಂದ ಕಂಪಲ್ಸರಿ ಕಾಂಪ್ಲಿಮೆಂಟರಿ ವಾಲಂಟರಿ ಕಲಾಭಿಮಾನಿಗಳಂತೂ ಸರೇ  ಸರೆ 
ಇವರೆಲ್ಲರೂ ಕಲಾಭಿಮಾನಿಗಳೇ. ಬಂಗಾರಿಯ ದುಂಡು ಮುಖವೇ ಕಲೆ!

ಮುಕ್ತಕ 

ಸ್ವಕೀಯ-ಪರಕೀಯ 
ನಿನ್ನವರಾದರು ಖಳರ ಸಂಗವು ಬೇಡ 
ಸುಜನರು ಪರರಾದರೇನು?
ನಿನ್ನೊಳೆ ಜನಿಸಿದ ರೋಗವ ಕಳೆಯದೆ 
ಕಾಡಿನ ಮೂಲಿಕೆ ತಾನು!
                                            **********
ಮುಂದಿನ ಪುಸ್ತಕ: ಕನ್ನಡ ಎಮ್ಮೆ. 

    ಸೋಮವಾರ, ಏಪ್ರಿಲ್ 22, 2013

    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • "ಜಲದ ಮೇಲ್ ತೇಲುವ ನೆಲದ ಬಸಿರಿನ ನೀರು ಥಕಥಕನೆ ಕುದಿದುರಿದು, ಗಿಡಮರ, ಪರ್ವತ ಗಿರಿಂಗಳು ಸರಭರನೆ ಮುರಿದುರುಲಿ, ಧಡಂ ಧಡಂ ಎಂದು ಬಿದ್ದೆದ್ದು ಪುಡಿಪುಡಿಯಾಗಿ, ಹುಡಿಹುಡಿಯಾಗಿ, ಮೀನು ಮತ್ಸ್ಯಂಗಳು      ಉಷ್ಣೋದಕದ ಭೀತಿಯಿಂ ಭಯಪಟ್ಟು ಕಂಗಾಲಾಗಿ ಕಾತರಮಾಗೀ"                                                                       ಒಂದು ಸಲ ಉಸಿರೆಳೆದುಕೊಂಡು, ಹೀರೋ ಮುಂದುವರಿಸಿದ ಅಸಂಪೂರ್ಣವಾಗಿದ್ದ ಆ ಮೊತ್ತಮೊದಲ ವಾಕ್ಯವನ್ನು.                                                                  "ತಿಮಿಂಗಿಲಗಳು ಬಾಯಿಂದ ನೊರೆಯುಗುಳಿ  ದಿಗ್ಭ್ರಾಂತವಾಗಿವಾಗಿ ಮರ, ವೃಕ್ಷಂಗಳಂ ಏರಿ ಕುಳಿತಾಗ, ಕಾಡು ಕಾನನ ಅಟವಿಯೋಳ್ ಗಿರಿ ಗಹ್ವರಗಳೋಳ್ ಪವಡಿಸಿರುವ ಗಂಧಸಿಂಧೂರ, ಪುಲಿ, ಸಿಂಹ, ಸಿಂಹಿಣಿ, ಕೇಸರಿಗಳ ಕನಸಂ ಕೆಟ್ಟು, ಅಡಬರಿಸಿ ಅಂ ಎಂದು ಊರಗಲ ಮಾರಗಲ ಬಾಯ್ತೆರೆ ತೆರೆದು, ಆನೆ, ಗಜಾದಿಂಗಳು ಸೊಂಡಿಲಿ ಗಿಂಡಿ ಲಿಯಂ ಮೇಲೆತ್ತಿ, ಮುಗಿಲಾಕಾಶ, ಗಗನ, ಚಂದ್ರ ಸೂರ್ಯ ನಕ್ಷತ್ರ ಮಂಡಲಕ್ಕೆತ್ತಿ ಕಿರ್ ರ್ ರ್ ಎಂದು ಕಿರಲಿ, ಭರ್ ರ್ ರ್  ಎಂದು ಭೋರ್ಗರೆದು ಭೂ ನೆಲಕ್ಕೆ ಅಪ್ಪಳಿಸೆ ಭೂಮಾತೆ ನೆಲತಾಯಿ ಪೃಥ್ವಿಯೊಡತಿ ಹೊಟ್ಟೆ ಸೀಳಿ ಹೋ  ಎಂದಳುತಳುತ ಕಂಣೀರು ಕಂಬನಿ ಸುರಿಸುರಿಸಿ, ಫಲಕುಸುಮದ ಭಾರದಿಂದ ಬಗ್ಗಿದ ತರುಷಂಡಂಗಳು ತತ್ತರಿಸಿ,ಶುಕ ಪಿಕ ಶಾರಿಕಾದಿ  ವಿಹಂಗಳು ಶೋಕಿಸಿ, ಲತಾ ಬಳ್ಳಿಗಳು ಭಸ್ಮೀಭೂತಮಾಗಿ ಬೂದಿಯಾಗಿ, ಶಿವನ ಮಸ್ತಕದೋಳ್ ರಾರಾಜಿಸುವ ಲಲಾಟ ಭಸ್ಮಮಾಗೀ."
    ಈಗ ನನ್ನ ಮುಕ್ತಕ. 
    ಓದಿದ್ದು 
    " ಆ ಮನೆ ಹುಡುಗಿಯು  ಫಸ್ಟ್ ಕ್ಲಾಸು ಬಂದಳು 
    ನೋಡಿ ಕಲಿಯಬೇಕು ನೀನು"
    "ಹಾಗೆಯೆ  ಮಾಡಿಯೆ  ಅವಳನ್ನೆ ನೋಡಿಯೆ 
    ಫೇಲಾದೆನಲ್ಲಮ್ಮ ನಾನು"!  
     
    ಗುರುವಾರ, ಏಪ್ರಿಲ್ 11, 2013

    ವಿಜಯ ಸಂವತ್ಸರದ ಯುಗಾದಿ.
    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.

    • ಸಾಕ್ಷಾತ್ ಕಲೆಯೇ ಆಗಿದ್ದ ಬಂಗಾರಿ ಕಲೋಪಾಸಕರ, ಕಲಾಪೋಷಕರ ಉದರಾಶ್ರಯ, ಪೋಷಣೆ, ಪ್ರೋತ್ಸಾಹಗಳಿಂದ ಪಾಪದ ಮುದ್ರೆಯನ್ನು ಪಡೆದು, ಜಗತ್ತಿಗೆ ತೋರಿಸಲು ಕೈಯಲ್ಲಿ ಹಿಡಿದು ನಿಂತಿದ್ದಾಳೆ ವಂಚನೆಯ ಕುರುಹಾದ ಹೆಂಣು ಮಗುವೊಂದನ್ನು!          
             ಅದಾರೋ ಗದರಿಕೊಂಡರು. 
             "ಕೇಳಿಸಲಿಲ್ಲವೇನೇ ಆಗಲೆ ಹೇಳಿದುದು? ಮುಂದೆ ಹೋಗು."
             ಇನ್ನೂ ಎಷ್ಟು ಮುಂದು ಹೋಗಬೇಕು ಬಂಗಾರಿ!
             ಕಾಂಪ್ಲಿಮೆಂಟರಿ ಪಾಸು ಪಡೆದ ಗಂಡಂದಿರೊಂದಿಗೆ ಬಂದು ನಾಟಕಗಳನ್ನು ನೋಡಿದ್ದ ಗರತಿ ಗೌರಮ್ಮಗಳು ಈ ಪಾಪಿ ಬಂಗಾರಿಯನ್ನು                  ಗುರುತಿಸಿ ತಂತಮ್ಮಲ್ಲಿಯೆ ಏನೇನೋ ಮಾತನಾಡಿಕೊಂಡರು. ಕಡೆಗೊಬ್ಬ ಮಹಾಸತಿ ಅಂದೂಬಿಟ್ಟರು.
     "ಇಂತಹ ಮುಂಡೆಯರಿಂದ ಮನೆಗಳೇ ಹಾಳಾಗುತ್ತವೆ. ಇವಳಿಗೆ ಭಿಕ್ಷೆ ಹಾಕುವುದೂ  ಮಹಾಪಾಪ!"
            ಇದು ಸತ್ಪಾತ್ರ ದಾನವಲ್ಲವೆ?
            ಬಂಗಾರಿಯದು ಈಗ ಸತ್ತ ಪಾತ್ರ. ಚಂಚಲಾಕ್ಷಿಯ ಅಕ್ಷಿಯಿಂದ ಚಂಚಲತೆ ಮಾಯವಾಗಿದ್ದಿತು. 
            ಮುರಿದ ಬೊಂಬೆ ಯಾವ ಮಗುವಿಗೂ ಬೇಡ!

    ಈಗ ನನ್ನ ಮುಕ್ತಕ. 

      ಡಾಕ್ಟರ್ ಶಾಪಿನಲ್ಲಿ.... 
      "ಈ ಔಷಧಿಯನೊಂದುಬಾಟಲಿ ಕುಡಿದರೆ
      ಮತ್ತೆ ಬರಬೇಕಿಲ್ಲವಲ್ಲ?"
      "ಹಾಗೆಂದೆ ಕಾಣುತ್ತೆ, ಇದನೊಯ್ದ ಜನರಲಿ
      ಒಬ್ಬರೂ ತಿರುಗಿ ಬಂದಿಲ್ಲ."!