ಶುಕ್ರವಾರ, ಜನವರಿ 25, 2013

ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • "ಐದು, ಆರು ಆದಾಗ ಆಗುವುದೇ ಹಾಗೆ. ನನಗೂ ಆಗೆಲ್ಲ ಬಹು ಕಷ್ಟವೆನಿಸುತ್ತಿತ್ತು. ಹತ್ತು ದಾಟಿತು, ನೋಡಿ. ಯಾವ ಚಿಂತೆಯೂ ಇಲ್ಲ ನಮಗೆ. ಎರಡು ಮಕ್ಕಳಾದರೂ ಅಳುತ್ತಲಿದ್ದರೆ ಚೆನ್ನಾಗಿ ನಿದ್ರೆ ಬೀಳುತ್ತೆ, ನನಗೆ ನಮ್ಮ ಮನೆಯವರಿಗೆ."
  • ಗಂಡ ಸತ್ತ ದುಃಖವನ್ನು ಮರೆಯಲು ಅಷ್ಟೇನೂ ಕಷ್ಟವಾಗಲಿಲ್ಲ ಆ ಪ್ರಾಣಿಗೆ. ಗಂಡ ಸತ್ತನೆಂಬ ಕಾರಣಕ್ಕೆ ತಾನು ವಿಕಾರವಾದುದಕ್ಕಾಗಿ ಆಗಿದ್ದ ದುಃಖ? ಗಂಡ ಸತ್ತದ್ದು ಒಮ್ಮೆ, ಒಂದೇ ಒಂದು ಸಲ. ತಾನು ಜನ್ಮಾದ್ಯಂತವೂ ಅನುಭವಿಸಬೇಕು ಈ ರೂಪವನ್ನು!
  • ಸಾಕೇನು ಮನುಷ್ಯನಿಗೆ ಅನ್ನ, ಬಟ್ಟೆ ಎರಡೇ? ಜೀವನದಲ್ಲಿ ಜೋಡೆ೦ಬುದು ಬೇಡವೇ? ತಲೆ ಬೋಳಾದ ಮಾತ್ರಕ್ಕೆ ತಲೆಯಲ್ಲಿಯ ವಿಚಾರಗಳೂ ಬೋಳಾಗುತ್ತವೆಯೇ? ಅನ್ನ ಉಣ್ಣುವ ಬಾಯಿಗೆ ಹುಂಣಾದ ಮಾತ್ರಕ್ಕೆ ಹೊಟ್ಟೆಯ ಹಸಿವು ಬಿಡುತ್ತದೆಯೇ? ಅಂಗಸೌಖ್ಯದ ಅರಿವು ಇನ್ನೂ ಸರಿಯಾಗಿ ಆಗಿರಲಿಲ್ಲ ಸುಭದ್ರೆಗೆ, ಆಗಲೇ ವೈಧವ್ಯ. ಸಾಲದುದಕ್ಕೆ ಕೈಲೊಂದು ಮಗು.
  • ತಲೆಗೊಂದು ಮಾತನಾಡಿದರು ಮಡಿವಂತ ಮಹಾಶಯರುಗಳು. ಇವರಲ್ಲಿ ಸುಭದ್ರೆಯೊಂದಿಗೆ ಸುಖಪಟ್ಟವರೆ ಹೆಚ್ಚು ಎಂದರೆ ಎಷ್ಟೂ ಸುಳ್ಳಲ್ಲ. ಸಿಕ್ಕು ಬಿದ್ದವನು ಕಳ್ಳ. ಪಾರಾದವನು ಪಂಚಾಯತಿದಾರ!
ಈಗ ನನ್ನ ಮುಕ್ತಕ:

ಸ್ವಭಾವ:
    ಸರಸ ಕಾವ್ಯಗಳೆಷ್ಟನೋದುತಲಿದ್ದರು
    ಸಖಿ ನಿನ್ನ ಮುಖ ಮಾತ್ರ ಗಂಟು.
    ಸಿಹಿಯಾದ ಪಾಯಸದೊಳಗಾಡುತಿದ್ದರು
    ಸಿಹಿಯಾಗುವುದುಂಟೆ ಸೌಟು?

    ಶುಕ್ರವಾರ, ಜನವರಿ 18, 2013

    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. 
    ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • ಮುಚ್ಚಿದ ಬಾಗಿಲನ್ನು ನೋಡಿ ಅಳುತ್ತ ಕೂಡುವುದು ಅವಿವೇಕಿಯ ಲಕ್ಷಣ. ಒಂದು ಮುಚ್ಚಿದಾಗ ಮತ್ತೊಂದು ತಾನೇ ತೆರೆದಿರುತ್ತದೆ. ಮಾರ್ಚಿನಲ್ಲಿ ಫೇಲಾದೆ ಎಂದು ಅಳುವ ವಿದ್ಯಾರ್ಥಿ ನಿರಾಶಾವಾದಿ-ಮುಂದೊಂದು ಸೆಪ್ಟೆಂಬರ್ ಕಾಣಲಿದೆ ಎನ್ನುವ ವಿದ್ಯಾರ್ಥಿ  ಆಶಾವಾದಿ. ಆಮೇಲೆಯೂ ಇದ್ದೇ ಇದೆ  ಮತ್ತೊಂದು ಮಾರ್ಚಿ ಎನ್ನುವವ ವಿಶಿಷ್ಟಾಶಾವಾದಿ. 
    • ಬಾರ್ ಗೆ ಒಮ್ಮೆ ಬಂದವನು ಬಾರಿಬಾರಿಗೂ ಬರಬೇಕೆನ್ನುತ್ತಾನೆ. ಅದು ಬಾರ್ ನ ಆಚಾರವೂ ಅಹುದು, ಬರುವವನ ಗ್ರಹಚಾರವೂ ಅಹುದು. ಹಣವು ಕೊಡುವ ಹಲವಾರು ಸವಲತ್ತುಗಳಲ್ಲಿ ಹಾಳಾಗುವುದೂ ಒಂದು.
    • ಕುಳಿತು ಉಂಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬುದು  ಆ ಎಂದಿನದೋ ಒಂದು ಹಳೆಯ ಗಾದೆಮಾತು. ಕುಳಿತು ಕುಡಿಯುವವನಿಗೆ? ಕುಬೇರನ ಹೊನ್ನೂ ಸಾಲದು. ಹೀಗಾಗದಿರಲೆಂದೋ ಏನೋ, ಕೆಲವರು ನಿಂತು ಕುಡಿದು, ಕಡೆಗೆ ಕುಡಿದು ಮಲಗುತ್ತಾರೆ; ಕೂಡುವ ದಡ್ಡತನವನ್ನೇ ಮಾಡುವುದಿಲ್ಲ.
    • ಮುದ್ದುವೀರ ದೇವರಂತ ಹುಡುಗ, ದಾವಣಗೇರಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ. ಈಗಲೂ ದೇವರಂತಹನೆ ಅನ್ನಿ, ಅವತಾರಗಲಷ್ಟೇ ಬೇರೆ-ಆಗ ರಾಮಾವತಾರ, ಈಗ ಕೃಷ್ಣಾವತಾರ!
    ಈಗ ನನ್ನ ಮುಕ್ತಕ-
    ಸುಭಾಷಿತ 
    ಅತಿಯಾದ ಬಳಕೆಯು ಬೆಲೆಯನು ಕಳೆವುದು 
    ಇದಕೊಂದು ಸಾಮತಿ ಇಹುದು.
    ಮಲಯ ಪರ್ವತದಲ್ಲಿ ಚಂದನ ವೃಕ್ಷವು 
    ಭಿಲ್ಲರ ಒಲೆಯುರಿಸುವುದು.
                                                       * * * * * * * * * * * * 

    ಶುಕ್ರವಾರ, ಜನವರಿ 4, 2013

    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ
    ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • ಬರೀ`ಸತ್ತ'ಎಂದರೆ ನಿಜವಾಗಿಯೂ ಸತ್ತ ಎಂದಷ್ಟೆ ಅರ್ಥ. `ಸತ್ತ, ಸೂಳೇಮಗ'ಎಂದರೆ ಅಷ್ಟೇ ನಿಜವಾಗಿಯೂ ಸತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿದಂತಾಯಿತಲ್ಲ?
    • "ಮುಂದಿನ ಜನ್ಮಗಳಲ್ಲಿ ರಾಜನಾಗಿ ಹುಟ್ಟುವ ಯೋಗವು, ಈಗ ವೇಷ ಹಾಕುವುದರಿಂದ ಹೋಗಿಬಿಡುತ್ತದೆ" ಎಂದರು ಅಜ್ಜಮ್ಮ.
    • ನಾಟಕವನ್ನೇನೋ ಎಲ್ಲರೂ ಪ್ರೀತಿಸುತ್ತೇವೆ. ಕಾಂಪ್ಲಿಮೆಂಟರಿ ಫ್ಯಾಮಿಲೀ ಪಾಸೂ  ದೊರೆತರಂತೂ ಸರೇ ಸರೆ.
    • ಸರಿಯಾದವರು ಮುಂದು ಬರಬೇಕು, ದೂರ ನಿಂತು ಟೀಕೆ ಮಾಡುವ ಬದಲು; ಸರಿ ಇಲ್ಲದವರನ್ನು ದೂರ ಸರಿಸಲಿಕ್ಕಲ್ಲ, ಸನಿಯ ಕರೆದು ತಿದ್ದಿ ಸರಿ ಮಾಡಿಕೊಡಲು.
    • ಆ ಮನೆಯಲ್ಲಿ ಆಗಲಿದ್ದ ಮದುವೆ ಆಗಲಿಲ್ಲ-ಈ ಕಂಪನಿ ಮನೆಯಲ್ಲಿ ಮಗುವಾಯಿತು ಅವಳಿಗೆ. ಬಂಗಾರ, ಬಂಗಾರದ ಕತ್ತೆಯಾದಳು.
    ನನ್ನ ಮುಕ್ತಕ

    ಹೊಂದಿಕೆ 
    ಕೃಷ್ಣನ ಮೈ ಬಣ್ಣ ಆಕಾಶನೀಲಿಯು 
    ಬಲರಾಮನದು ಸ್ವರ್ಣವರ್ಣ.
    ಪೀತಾಂಬರನು ಕೃಷ್ಣ ನೀಲಾಂಬರನು ರಾಮ 
    ಎಂತಹ ಹೊಂದಿಕೆಯಣ್ಣ!
                                                                                 * * * * * * * * * *