ಶುಕ್ರವಾರ, ಜನವರಿ 18, 2013

ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. 
ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಮುಚ್ಚಿದ ಬಾಗಿಲನ್ನು ನೋಡಿ ಅಳುತ್ತ ಕೂಡುವುದು ಅವಿವೇಕಿಯ ಲಕ್ಷಣ. ಒಂದು ಮುಚ್ಚಿದಾಗ ಮತ್ತೊಂದು ತಾನೇ ತೆರೆದಿರುತ್ತದೆ. ಮಾರ್ಚಿನಲ್ಲಿ ಫೇಲಾದೆ ಎಂದು ಅಳುವ ವಿದ್ಯಾರ್ಥಿ ನಿರಾಶಾವಾದಿ-ಮುಂದೊಂದು ಸೆಪ್ಟೆಂಬರ್ ಕಾಣಲಿದೆ ಎನ್ನುವ ವಿದ್ಯಾರ್ಥಿ  ಆಶಾವಾದಿ. ಆಮೇಲೆಯೂ ಇದ್ದೇ ಇದೆ  ಮತ್ತೊಂದು ಮಾರ್ಚಿ ಎನ್ನುವವ ವಿಶಿಷ್ಟಾಶಾವಾದಿ. 
  • ಬಾರ್ ಗೆ ಒಮ್ಮೆ ಬಂದವನು ಬಾರಿಬಾರಿಗೂ ಬರಬೇಕೆನ್ನುತ್ತಾನೆ. ಅದು ಬಾರ್ ನ ಆಚಾರವೂ ಅಹುದು, ಬರುವವನ ಗ್ರಹಚಾರವೂ ಅಹುದು. ಹಣವು ಕೊಡುವ ಹಲವಾರು ಸವಲತ್ತುಗಳಲ್ಲಿ ಹಾಳಾಗುವುದೂ ಒಂದು.
  • ಕುಳಿತು ಉಂಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬುದು  ಆ ಎಂದಿನದೋ ಒಂದು ಹಳೆಯ ಗಾದೆಮಾತು. ಕುಳಿತು ಕುಡಿಯುವವನಿಗೆ? ಕುಬೇರನ ಹೊನ್ನೂ ಸಾಲದು. ಹೀಗಾಗದಿರಲೆಂದೋ ಏನೋ, ಕೆಲವರು ನಿಂತು ಕುಡಿದು, ಕಡೆಗೆ ಕುಡಿದು ಮಲಗುತ್ತಾರೆ; ಕೂಡುವ ದಡ್ಡತನವನ್ನೇ ಮಾಡುವುದಿಲ್ಲ.
  • ಮುದ್ದುವೀರ ದೇವರಂತ ಹುಡುಗ, ದಾವಣಗೇರಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ. ಈಗಲೂ ದೇವರಂತಹನೆ ಅನ್ನಿ, ಅವತಾರಗಲಷ್ಟೇ ಬೇರೆ-ಆಗ ರಾಮಾವತಾರ, ಈಗ ಕೃಷ್ಣಾವತಾರ!
ಈಗ ನನ್ನ ಮುಕ್ತಕ-
ಸುಭಾಷಿತ 
ಅತಿಯಾದ ಬಳಕೆಯು ಬೆಲೆಯನು ಕಳೆವುದು 
ಇದಕೊಂದು ಸಾಮತಿ ಇಹುದು.
ಮಲಯ ಪರ್ವತದಲ್ಲಿ ಚಂದನ ವೃಕ್ಷವು 
ಭಿಲ್ಲರ ಒಲೆಯುರಿಸುವುದು.
                                                   * * * * * * * * * * * * 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ