ಶುಕ್ರವಾರ, ಜನವರಿ 25, 2013

ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • "ಐದು, ಆರು ಆದಾಗ ಆಗುವುದೇ ಹಾಗೆ. ನನಗೂ ಆಗೆಲ್ಲ ಬಹು ಕಷ್ಟವೆನಿಸುತ್ತಿತ್ತು. ಹತ್ತು ದಾಟಿತು, ನೋಡಿ. ಯಾವ ಚಿಂತೆಯೂ ಇಲ್ಲ ನಮಗೆ. ಎರಡು ಮಕ್ಕಳಾದರೂ ಅಳುತ್ತಲಿದ್ದರೆ ಚೆನ್ನಾಗಿ ನಿದ್ರೆ ಬೀಳುತ್ತೆ, ನನಗೆ ನಮ್ಮ ಮನೆಯವರಿಗೆ."
  • ಗಂಡ ಸತ್ತ ದುಃಖವನ್ನು ಮರೆಯಲು ಅಷ್ಟೇನೂ ಕಷ್ಟವಾಗಲಿಲ್ಲ ಆ ಪ್ರಾಣಿಗೆ. ಗಂಡ ಸತ್ತನೆಂಬ ಕಾರಣಕ್ಕೆ ತಾನು ವಿಕಾರವಾದುದಕ್ಕಾಗಿ ಆಗಿದ್ದ ದುಃಖ? ಗಂಡ ಸತ್ತದ್ದು ಒಮ್ಮೆ, ಒಂದೇ ಒಂದು ಸಲ. ತಾನು ಜನ್ಮಾದ್ಯಂತವೂ ಅನುಭವಿಸಬೇಕು ಈ ರೂಪವನ್ನು!
  • ಸಾಕೇನು ಮನುಷ್ಯನಿಗೆ ಅನ್ನ, ಬಟ್ಟೆ ಎರಡೇ? ಜೀವನದಲ್ಲಿ ಜೋಡೆ೦ಬುದು ಬೇಡವೇ? ತಲೆ ಬೋಳಾದ ಮಾತ್ರಕ್ಕೆ ತಲೆಯಲ್ಲಿಯ ವಿಚಾರಗಳೂ ಬೋಳಾಗುತ್ತವೆಯೇ? ಅನ್ನ ಉಣ್ಣುವ ಬಾಯಿಗೆ ಹುಂಣಾದ ಮಾತ್ರಕ್ಕೆ ಹೊಟ್ಟೆಯ ಹಸಿವು ಬಿಡುತ್ತದೆಯೇ? ಅಂಗಸೌಖ್ಯದ ಅರಿವು ಇನ್ನೂ ಸರಿಯಾಗಿ ಆಗಿರಲಿಲ್ಲ ಸುಭದ್ರೆಗೆ, ಆಗಲೇ ವೈಧವ್ಯ. ಸಾಲದುದಕ್ಕೆ ಕೈಲೊಂದು ಮಗು.
  • ತಲೆಗೊಂದು ಮಾತನಾಡಿದರು ಮಡಿವಂತ ಮಹಾಶಯರುಗಳು. ಇವರಲ್ಲಿ ಸುಭದ್ರೆಯೊಂದಿಗೆ ಸುಖಪಟ್ಟವರೆ ಹೆಚ್ಚು ಎಂದರೆ ಎಷ್ಟೂ ಸುಳ್ಳಲ್ಲ. ಸಿಕ್ಕು ಬಿದ್ದವನು ಕಳ್ಳ. ಪಾರಾದವನು ಪಂಚಾಯತಿದಾರ!
ಈಗ ನನ್ನ ಮುಕ್ತಕ:

ಸ್ವಭಾವ:
    ಸರಸ ಕಾವ್ಯಗಳೆಷ್ಟನೋದುತಲಿದ್ದರು
    ಸಖಿ ನಿನ್ನ ಮುಖ ಮಾತ್ರ ಗಂಟು.
    ಸಿಹಿಯಾದ ಪಾಯಸದೊಳಗಾಡುತಿದ್ದರು
    ಸಿಹಿಯಾಗುವುದುಂಟೆ ಸೌಟು?

    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ