ಗುರುವಾರ, ಏಪ್ರಿಲ್ 11, 2013

ವಿಜಯ ಸಂವತ್ಸರದ ಯುಗಾದಿ.
ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.

  • ಸಾಕ್ಷಾತ್ ಕಲೆಯೇ ಆಗಿದ್ದ ಬಂಗಾರಿ ಕಲೋಪಾಸಕರ, ಕಲಾಪೋಷಕರ ಉದರಾಶ್ರಯ, ಪೋಷಣೆ, ಪ್ರೋತ್ಸಾಹಗಳಿಂದ ಪಾಪದ ಮುದ್ರೆಯನ್ನು ಪಡೆದು, ಜಗತ್ತಿಗೆ ತೋರಿಸಲು ಕೈಯಲ್ಲಿ ಹಿಡಿದು ನಿಂತಿದ್ದಾಳೆ ವಂಚನೆಯ ಕುರುಹಾದ ಹೆಂಣು ಮಗುವೊಂದನ್ನು!          
         ಅದಾರೋ ಗದರಿಕೊಂಡರು. 
         "ಕೇಳಿಸಲಿಲ್ಲವೇನೇ ಆಗಲೆ ಹೇಳಿದುದು? ಮುಂದೆ ಹೋಗು."
         ಇನ್ನೂ ಎಷ್ಟು ಮುಂದು ಹೋಗಬೇಕು ಬಂಗಾರಿ!
         ಕಾಂಪ್ಲಿಮೆಂಟರಿ ಪಾಸು ಪಡೆದ ಗಂಡಂದಿರೊಂದಿಗೆ ಬಂದು ನಾಟಕಗಳನ್ನು ನೋಡಿದ್ದ ಗರತಿ ಗೌರಮ್ಮಗಳು ಈ ಪಾಪಿ ಬಂಗಾರಿಯನ್ನು                  ಗುರುತಿಸಿ ತಂತಮ್ಮಲ್ಲಿಯೆ ಏನೇನೋ ಮಾತನಾಡಿಕೊಂಡರು. ಕಡೆಗೊಬ್ಬ ಮಹಾಸತಿ ಅಂದೂಬಿಟ್ಟರು.
 "ಇಂತಹ ಮುಂಡೆಯರಿಂದ ಮನೆಗಳೇ ಹಾಳಾಗುತ್ತವೆ. ಇವಳಿಗೆ ಭಿಕ್ಷೆ ಹಾಕುವುದೂ  ಮಹಾಪಾಪ!"
        ಇದು ಸತ್ಪಾತ್ರ ದಾನವಲ್ಲವೆ?
        ಬಂಗಾರಿಯದು ಈಗ ಸತ್ತ ಪಾತ್ರ. ಚಂಚಲಾಕ್ಷಿಯ ಅಕ್ಷಿಯಿಂದ ಚಂಚಲತೆ ಮಾಯವಾಗಿದ್ದಿತು. 
        ಮುರಿದ ಬೊಂಬೆ ಯಾವ ಮಗುವಿಗೂ ಬೇಡ!

ಈಗ ನನ್ನ ಮುಕ್ತಕ. 

    ಡಾಕ್ಟರ್ ಶಾಪಿನಲ್ಲಿ.... 
    "ಈ ಔಷಧಿಯನೊಂದುಬಾಟಲಿ ಕುಡಿದರೆ
    ಮತ್ತೆ ಬರಬೇಕಿಲ್ಲವಲ್ಲ?"
    "ಹಾಗೆಂದೆ ಕಾಣುತ್ತೆ, ಇದನೊಯ್ದ ಜನರಲಿ
    ಒಬ್ಬರೂ ತಿರುಗಿ ಬಂದಿಲ್ಲ."!

    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ