ಶುಕ್ರವಾರ, ಮಾರ್ಚ್ 22, 2013


ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ಮುಹೂರ್ತವನ್ನಿಟ್ಟುಕೊಟ್ಟರು ವಶಿಷ್ಠ ಮಹರ್ಷಿಗಳು. ಅದೇ ಶುಭ ಮುಹೂರ್ತಕ್ಕೆ ಸರಿಯಾಗಿ ಶ್ರೀರಾಮ ಅರಣ್ಯವಾಸಕ್ಕಾಗಿ ಅಯೋಧ್ಯೆಯಿಂದ ಹೊರ ಹೊರಟ, ಸೀತಾ ಲಕ್ಷ್ಮಣ ಸಮೇತನಾಗಿ. 
  • ಇಬ್ಬರು ಮಹಾನುಭಾವರ ಮಿಳನ ಎಂದೂ ವ್ಯರ್ಥವಾದುದಿಲ್ಲ ಮಾನವ ಚರಿತ್ರೆಯಲ್ಲಿ. 
  • ಮಕ್ಕಳಾಗಲಿಲ್ಲ ಎಂದಾವ ಹೆಂಣೂ ಬಾವಿಯಲ್ಲಿ ಹಾರಿಕೊಳ್ಳುವುದಿಲ್ಲ. ಇಂದಲ್ಲ, ಇನ್ನು ಮುಂದಾದರೂ ಆದಾವು ಎಂದು  ಮೊದಲ ಕೆಲವು ವರ್ಷಗಳನ್ನು ಆಶೆಯಲ್ಲಿ ಕಳೆಯುತ್ತದೆ. ಆಮೇಲೆ ಇದ್ದೇ ಇವೆ ನೂರೆಂಟು ದೇವರುಗಳು. ಕಲ್ಲು, ಗುಂಡುಗಳ ಪೂಜೆ, ಜೋಡಿ ಮರಗಳನ್ನು ಸುತ್ತುವುದು, ದಾನ ಧರ್ಮವೆಂದು ಮನೆಯಲ್ಲಿದ್ದುದನ್ನಿಷ್ಟು ಅವರಿವರಿಗೆ ಕೊಟ್ಟು ಹಾಳು ಮಾಡುವುದು. ಸೋತೆ ಎಂದು ದೇವನೂ ಕೈ ಎತ್ತಿದ ಮೇಲೆ ಮನುಷ್ಯ ಪ್ರಯತ್ನ-ಲೇಡಿ ಡಾಕ್ಟರ ಬಳಿ ಲೇವಡಿ!
  • ನಾಟಕ ಕಂಪನಿಯ ಸರ್ವೀಸು, ಕಾಫಿ ಹೋಟೆಲ್ ಸರ್ವೀಸು, ಕಾಮಿನಿಯರ ಸರ್ವೀಸು, ಇವೆಲ್ಲವೂ ಹೋಲ್ ಇಂಡಿಯಾ ಸರ್ವೀಸ್ ಗಳು.                                                                                                                           ಒಂದೇ ಊರು, ಒಂದೇ ಸ್ಥಾನ ಎಂಬ ಹುಚ್ಚು ಇಲ್ಲ ಇವರಿಗೆ. ಇಂದು ಇಲ್ಲಿ, ನಾಳೆ ಇನ್ನೆಲ್ಲಿಯೋ! ಬಂಗಾರುಪೇಟೆ ರೈಲ್ವೇ ಸ್ಟೇಷನ್ ಹೋಟೆಲಲ್ಲಿ ಕಪ್ಪು ತೊಳೆಯುವ ಹುಡುಗ ನಾಲ್ಕೇ ದಿನಗಳಲ್ಲಿ ಬೊಂಬಾಯಿಯಲ್ಲಿ ಗಲ್ಲಿಯ ಪೂರಿ, ಭಾಜಿ ದುಕಾಣ್ ಒಂದರಲ್ಲಿ ಎಂಜಲ ಎಲೆ ತೆಗೆಯುತ್ತಿರುತ್ತಾನೆ. ಬೆಂಗಳೂರಿನ ಪೈಪ್ ಲೈನ್ ನಲ್ಲಿ ಸಾಧಾರಣ `ಪ್ರಾಕ್ಟೀಸ್' ಇರುವ ಬಡ ಸೌಂದರ್ಯ ಜೀವಿಯೊಬ್ಬಳು ರೇಸ್ ಸೀಜನ್ ನಲ್ಲಿ ಮದರಾಸಿನ ಹೈಕ್ಲಾಸ್ ಹೋಟೆಲಲ್ಲಿ ತೇಲಬಹುದು. ಇಂದು ಶಿವಕುಮಾರ ಸಾಮ್ರಾಜ್ಯ ಸಂಗೀತ ನಾಟಕ ಕಂಪನಿಯಲ್ಲಿ ಸೇವಕ-ನಾಳೆಯೇ ಗೋಕರ್ಣದ ಶಾಸ್ತ್ರೀ ಕಲಾಮಂಡಲಿಯಲ್ಲಿ ಅಶ್ವತ್ಥಾಮ. ಪಾಕಿಸ್ತಾನದಲ್ಲಿ ಕನ್ನಡ ಕಬೀರ್ ಹಾಕಿದರೆ ಅಲ್ಲಿಗೂ ರೆಡಿ!
  • "ನಾನಯ್ಯಾ, ನಾನು. ಈ ಕಂಪನಿಯನ್ನು ಕಟ್ಟಿ ನಿಲ್ಲಿಸಿ ಈ ಸ್ಥಿತಿಗೆ ತಂದವನು ಯಾವ ಸೂಳೇಮಗ ಗೊತ್ತೇ? ನಾನು. .."
ಈಗ ನನ್ನ ಮುಕ್ತಕ:

ಸತ್ಯವ್ರತ!
"ಸತ್ಯವೆಂಬುದು ಬಹು ಬೆಲೆಯುಳ್ಳದ್ದೆನ್ನುತ 
ತಿಳಿದಿರುವವನಯ್ಯ ನಾನು."
"ಇರಬೇಕು, ಅದಕಾಗಿ ಜತನದಿ ಬಳಸುವೆ 
ಅಪರೂಪಕೊಮ್ಮೊಮ್ಮೆ ಅದನು!"
                                                        * * * * * * * * * * * *

    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ