ಶುಕ್ರವಾರ, ಮಾರ್ಚ್ 1, 2013


ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
ಫೋ: ೨೩೬೭೬೭೬         Email: sahithyaprakashana@yahoo.co.in
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ.
ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • `ಹಾ, ತಿಳಿಯಿತು ಈಗ. ನಿದ್ರೆಗೆ ಮುಖ್ಯವಾಗಿ ಬೇಕಾದುದು ಹಾಸಿಗೆ, ಮಂಚವಲ್ಲ. ನಿದ್ರಾಭಂಗಕ್ಕೆ ಕಾರಣ ಒಂದೇ, ಅದು ಯೋಚನೆ. ಯಾವ ಚಿಂತೆಯೂ ಇಲ್ಲ ಈ ಗಮಾರನಿಗೆ. ಹಾಯಾಗಿ ಗೊರಕೆ ಕೊರೆಯುತ್ತಿದ್ದಾನೆ.'
  •  ಹಾಳು ಬಾಳಿನ ಲೆಕ್ಕಾಚಾರವೇ ಹೀಗೆ. ಬದುಕುತ್ತೇನೆ ಎಂದು ಒದ್ದಾಡಿದಳು ಸುಭದ್ರ, ಸಾಯಿ ಎಂದಿತು. ಸಾಯಲು ಸನ್ನದ್ಧಳಾಗಿ  ಹೊರಬಂದಳು. ಬದುಕು ನಡೆ ಎಂದಿತು. ಇರುತ್ತೇನೆ ಎನ್ನುವಾಗ ಇರುವುದೆಷ್ಟು ಕಷ್ಟವೋ, ಹೋಗುತ್ತೇನೆ  ಎನ್ನುವಾಗ ಹೋಗುವುದೂ ಅಷ್ಟೇ ಕಷ್ಟ, ಪಾಪ!
  • "ನನಗೂ ನಿಮ್ಮ ಹೆಂಡತಿಗೂ ಒಂದೇ ಭೇದ. ಮೊದಲು ಮದುವೆ, ಆಮೇಲೆ ಇನ್ನೊಂದು ಆಕೆಯೊಟ್ಟಿಗೆ. ಅದು ಇನ್ನೂ ಆಗಲಿಲ್ಲ. ನನ್ನ ಸಮಾಚಾರ ಹಾಗಲ್ಲ. ಆಮೇಲೆ ಮದುವೆಯಾಗೋಣ. ಮೊದಲು ಇನ್ನೊಂದು ಆಗಲಿ ಬನ್ನಿ."
  • ಊರೆಲ್ಲವೋ ನಕ್ಕ ಮೇಲೆ ಕಿವುಡ ನಕ್ಕ ಎಂಬಂತೆ, ಲೋಕಕ್ಕೆಲ್ಲವೂ ತಿಳಿದ ಮೇಲೆ ಶ್ರೀನಿವಾಸಶೆಟ್ಟರಿಗೆ ತಿಳಿಯಿತು. 
ಇಗೋ ನನ್ನ ಮುಕ್ತಕ:
ಅದೃಷ್ಟ 
ಆಪತ್ತಿನೊಳಗೆಯೆ ಅನುಕೂಲವಿರುವುದು 
ಅದೃಷ್ಟ ಸರಿಯಿದ್ದವರಿಗೆ. 
ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ಬಾಯ್ದೆರೆದು 
ತಲೆಯ ಮೇಲಕೆ ಬಿದ್ದ ಹಾಗೆ!

    ಕಾಮೆಂಟ್‌ಗಳಿಲ್ಲ:

    ಕಾಮೆಂಟ್‌‌ ಪೋಸ್ಟ್‌ ಮಾಡಿ