ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :9845264304)
- ಗಂಟೆ ಆರೋ, ಒಂಬತ್ತೋ, ಹನ್ನೊಂದೋ ಆಗಿರಬೇಕು. ಪಿಂಚಿನಿ ಪುರುಷನಿಗೆ ಈ ಮೂರೂ ಒಂದೇ ತಾನೆ? ಬೇಗ ಎದ್ದರೆ ಲಾಭವಿಲ್ಲ, ತಡವಾಗಿ ಎದ್ದರೆ ನಷ್ಟವಿಲ್ಲ.
- ಟೆಲಿಫೋನು ಒಂದು ದುಬಾರಿ ಶತ್ರು. ನಮಗೆ ಯಾರು ಬೇಕೋ ಅವರು ಸಿಕ್ಕುವುದಿಲ್ಲ. ಯಾರು ಬಹಳ ಬೇಡವೋ ಅವರ ಕೈಗೆ ನಾವು ಸಿಕ್ಕಿಬೀಳುತ್ತೇವೆ.
- ಟೆಲಿಫೋನು ಸುಮ್ಮನಾಯಿತೆಂದು ಸಂತೋಷಪಡುವವನು ದಡ್ಡ. ಅದು ಸುಮ್ಮನಾಗುವುದು ಮತ್ತೆ ಬಾರಿಸಲಿಕ್ಕೇ.
- ಯಾರಾದರೂ ನಾವಿಲ್ಲದಾಗ ಮನೆಗೆ ಬಂದು, ಬಂದೊಡನೆ ಅವರನ್ನು ಕಾಣಲು ಹೇಳಿ ಹೋದರೆ ಒಂದೇ ಅರ್ಥ ಕೆಲಸ ಅವರದು-ನಮ್ಮದಲ್ಲ, ನಮಗೆ ಹಣ ಕೊಡುವವರು ಉಪಕಾರ ಮಾಡುವವರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆಯೇ?
- ಡಿಗ್ರಿ ಬೇರೆ. ನಡತೆ ಬೇರೆ. ಇದಕ್ಕೂ ಅವಕ್ಕೂ ಸಂಬಂಧವೇ ಇಲ್ಲ.
- "ಹೌದು, ಸರಕಾರಿ ಕೆಲಸದಲ್ಲಿ ಇವೆಲ್ಲ ಶ್ರಾದ್ಧ ನಿಯಮಗಳಿದ್ದಂತೆ. ಮಾಡದಿದ್ದರೆ ತಪ್ಪು; ಮಾಡಿದರೆ ಪ್ರಯೋಜನವಿಲ್ಲ"
ಹದ್ದಿಗೆ
ಆಕಾಶದೆತ್ತರ ಹಾರಾಡುತಿದ್ದರು
ನೀನರಸುವುದೊಂದು ಹೆಣವ.
ಹದ್ದೆ ನಿನ್ನಂತೆಯೆ ಕೆಲರು ಮೇಲೇರುವ
ರರಸಲು ಪರರವಗುಣವ.
**********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ