- ಈ ಪದ್ಮಮ್ಮ ವಿಪರೀತ ಪತಿವ್ರತೆ, ಅಥವಾ ಪತಿವೃಥಾ! ಆಕೆಯ ಗಂಡ ಮಾತ್ರ ಸಾಕ್ಷಾತ್ ದೇವರಂಥವನು -ಇದ್ದಾನೆ ಅಂದರೆ ಇದ್ದಾನೆ, ಇಲ್ಲ ಅಂದರೆ ಇಲ್ಲ-ಹಾಗಿದ್ದಾನೆ ಪ್ರಾಣಿ.
- ನಾನು, ನೀನು, ಈ ವಿಶ್ವದಲ್ಲಿಯ ಯಾವ ಪ್ರಾಣಿಯೂ ಪಾಪಸಂಭವರಲ್ಲ. ಇದನ್ನು ಭದ್ರವಾಗಿ ನಂಬು.
- ಹಿಮಾಲಯದ ಶಿಖರದಷ್ಟೆತ್ತರದಲ್ಲಿದ್ದ ಹಿಂದೂ ಧರ್ಮ, ಸಪ್ತ ಸಾಗರಗಳಷ್ಟು ಆಳ, ವಿಸ್ತಾರಗಳಿದ್ದ ಹಿಂದೂ ಧರ್ಮ-ಒಂದು ಧರ್ಮವಾಗಿ ಉಳಿದಿದೆಯೇ?
- ಇಂದು ಜನತೆಗೆ ದೇವರು ಬೇಕಿಲ್ಲ, ದೇವಾಲಯಗಳು ಬೇಕು. ಮತಾಚರಣೆ , ಗ್ರಂಥಪೂಜೆ ಈ ದನದಂತಹ ಜನತೆಗೆ ಸಾಕೇ ಸಾಕು.
- ಮಾಧೂ! ನತ್ತು ಕಳೆದಿದೆ, ತೂತು ಉಳಿದಿದೆ-ಆ ತೂತನ್ನೇ ನತ್ತು ಎಂದು ಭ್ರಮಿಸಿ ನಾವಿಂದು ಸಂತೃಪ್ತರಾಗಿ ಕತ್ತೆಯಂತೆ ತಿಪ್ಪೆಯಲ್ಲಿ ಹೊರಳಾಡುತ್ತಿದ್ದೇವೆ.
ಮೋಸ
ಆತನು ನಿನಗಿಂದು ಮೋಸ ಮಾಡಿದನೇನು?
ನಾಚಿಕೋಬೇಕಯ್ಯ ಅವನು.
ಆತನೇ ಮತ್ತೊಮ್ಮೆ ಮೋಸ ಮಾಡಿದನೇನು?
ನಾಚಿಕೋಬೇಕಯ್ಯ ನೀನು!
-----
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ