ಬುಧವಾರ, ಸೆಪ್ಟೆಂಬರ್ 12, 2012

  • ಮಂತ್ರಿಗಳು ಅಂದರೆ ಸರ್ವಜ್ಞರಲ್ಲವೆ ? ಅವರಿಗೆ ಗೊತ್ತಿಲ್ಲದ ವಿಷಯ ಜಗತ್ತಿನಲ್ಲಿ ಯಾವುದಿದೆ? ಅಲ್ಲದೆ ಬಂದ ನಂತರ ಅವರು ಏನಾದರೂ ಪ್ರಶ್ನೆಗಳನ್ನು ಕೇಳಲೇಬೇಕಲ್ಲವೆ ?  
"ನೀವು ಹರ್ನಿಯಾ ಆಪರೇಷನ್ ಹೇಗೆ ಮಾಡುತ್ತೀರಿ?"
"ಲೋಕಲ್ ಅನೆಸ್ತೆeಷಿಯಾ....." 
ಇನ್ನೂ ಡಿ.ಎಂ.ಓ. ಸಾಹೇಬರ ಉತ್ತರ ಬಾಯಲ್ಲಿಯೇ ಇತ್ತು. ಹಸನ್ಮುಖಿಗಳಾದ ಮಂತ್ರಿಗಳು ನುಡಿದರು,
"ದಟ್ ಈಜ್ ವೇರಿ ಗುಡ್! ನಾವು ಯಾವಾಗಲೂ ಲೋಕಲ್ ಪ್ರಾಡ ಕ್ಟ್ಸ್ ಗಳಿಗೆ ಪ್ಯಾಟ್ರಿನೇಟ್ ಮಾಡಬೇಕು." 
  • ಫ್ಯಾಮಿಲಿ ಪ್ಲಾನಿಂಗ್ ಈಗ ಸುರುವಾಗಿದೆ. ಈ ವಿಷಯದಲ್ಲಂತೂ ಲಕ್ಷ್ಮಿ ಬಹಳ ಸ್ಟ್ರಿಕ್ಟ್. ನಮ್ಮ ಬೆಡ್ ರೂಮ್ ನಲ್ಲಿಯೇ  ಗೋಡೆಯ ಮೇಲೆ ಬರೆಯಿಸಿಟ್ಟಿದ್ದಾಳೆ-ಒಂದು ಬೇಕು, ಎರಡು ಸಾಕು, ಮೂರಾದರೆ ಗಂಡನನ್ನು ಬಿಸಾಕು!
        ಇವತ್ತಿಗೆ ಇಷ್ಟು. ಇನ್ನು ನನ್ನ ಒಂದು ಮುಕ್ತಕ:
ದುಷ್ಕೃತ್ಯ 
ಮೀನಿನ ಮೂಟೆಯು ದಾಟಿ ಹೋದರು ಕೂಡ 
ವಾಸನೆ ಬರುವುದು ಹಿಂದೆ.
ಗೈದು ದುಷ್ಕೃತ್ಯವ ಗೆದ್ದೆನೆಂದೆನಬೇಡ 
ಫಲ ಕೂಡಿ ಬರುವುದು ಮುಂದೆ.  
                                                                         ---

4 ಕಾಮೆಂಟ್‌ಗಳು:

  1. ಬ್ಲಾಗಿಗೆ ಮತ್ತೆ ಸ್ವಾಗತ.ಮುಕ್ತಕಗಳು,ಕವನರಚನೆಯಲ್ಲಿ ನಿಮಗಿರುವ ಶುದ್ಧ ಪ್ರತಿಭೆಯ ಅನಾವರಣವಾಗಲಿ.ನನ್ನಂತೆ ಆಲಸಿಗಳಾಗುವುದಿಲ್ಲ ಎಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವಂದನೆಗಳು. ಆಲಸ್ಯವೆಂಬುದು ನಮ್ಮ ಹೆಸರಿಗೇ ಲಿಂಕ್ ಆಗಿದ್ದರೆ ಏನು ಮಾಡುವುದು?:) ನಿಮ್ಮ ಬ್ಲಾಗ್ ಬರಹಗಳನ್ನು ನಿರೀಕ್ಷಿಸುತ್ತೇನೆ.

      ಅಳಿಸಿ